ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ. ಕರೀಂಖಾನ್
ಗಾಯನ: ಎಂ.ಬಾಲಮುರಳೀಕೃಷ್ಣ

ನಟವರ ಗಂಗಾಧರ |೨|
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ ಅ ಅ ಅ ಆ

ನಟವರ ಗಂಗಾಧರ!

ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ ಇ ಇ ಇ ಇ ಈ
ಅ ಅ ಅ ಅ ಅ ಅ ಅ ಆ

ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೆ ನೀ ತೂಗಿ ಇ ಇ ಇ ಇ ಇ ಇ ಇ ಇ ಈ
ನಗುವೇ ನೀ ತೂಗಿ ಇ ಇ ಇ ಈ

ನಟವರ ಗಂಗಾಧರ!

ತೋರಿ ನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ ಎ ಎ ಎ ಏ
ದಾರಿ ಕವಲಾಗಿ ಮನ ಮಾರುವಾಗ 
ಪ್ರಭುವೇ ಮುಂದಿಡುವೆ ಎ ಎ ಎ ಎ ಏ |೨| 

ನಟವರ ಗಂಗಾಧರ |೨|
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ ಅ ಅ ಅ ಆ

ನಟವರ ಗಂಗಾಧರ!

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ
ವರ್ಗ: ಡಾ.ಎಂ.ಬಾಲಮುರಳಿಕೃಷ್ಣ ಗಾಯನ